
ಬೆಂಗಳೂರು: “ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇಟ್ಟುಕೊಂಡಿದ್ದೇನೆ. ಅದು ಆಗುತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಜೀವನದಲ್ಲಿ ಎರಡು ಸಾಧ್ಯತೆಗಳಷ್ಟೇ ಇವೆ—ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ಅಥವಾ ಶಿಕ್ಷಕನಾಗಿ ನಿವೃತ್ತಿಯಾಗುವುದು” ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
“ದೇವೇಗೌಡರ ಮಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬಹುದಾದರೆ, ಕನಕಪುರದ ರೈತನ ಮಗ, ಸಿದ್ದರಾಮಯ್ಯನವರ ಹಿನ್ನೆಲೆ, ಯಡಿಯೂರಪ್ಪನವರ ಸಾಮಾನ್ಯ ಕುಟುಂಬ, ಅರವಿಂದ್ ಕೇಜ್ರಿವಾಲ್ ಹಾಗೂ ನರೇಂದ್ರ ಮೋದಿ ಅವರಂತೆ ಸಾಮಾನ್ಯ ಹಿನ್ನೆಲೆಯಿಂದ ಬಂದವರು ದೇಶದ ಪ್ರಮುಖ ಹುದ್ದೆಗೇರಬಹುದಾದರೆ, ನಾನು ಕೂಡ ಮುಖ್ಯಮಂತ್ರಿ ಆಗಬಾರದೇ?” ಎಂದು ಪ್ರಶ್ನಿಸಿದ್ದಾರೆ.
“ನಾನು ಸಿಎಂ ಆಗುತ್ತೇನೆ ಎಂಬುದು ನನ್ನ ಆತ್ಮವಿಶ್ವಾಸ. ಆಗಲಿಲ್ಲ ಅಂದರೆ ಶಿಕ್ಷಕನಾಗಿಯೇ ಇರುತ್ತೇನೆ” ಎಂದು ಪ್ರದೀಪ್ ಈಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.







