New PF Rules | PF ವೇತನ ಮಿತಿ ₹15,000ರಿಂದ ₹25,000ಕ್ಕೆ ಏರಿಕೆ: 51 ಲಕ್ಷ ಉದ್ಯೋಗಿಗಳಿಗೆ ಲಾಭ


PF ವೇತನ ಮಿತಿ ₹15,000ರಿಂದ ₹25,000ಕ್ಕೆ ಏರಿಕೆ: 51 ಲಕ್ಷ ಉದ್ಯೋಗಿಗಳಿಗೆ ಲಾಭ

ನವದೆಹಲಿ: ದೇಶಾದ್ಯಂತ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಭವಿಷ್ಯ ನಿಧಿ (PF) ನಿಯಮಗಳ ಅಡಿಯಲ್ಲಿ ಇರುವ ವೇತನ ಮಿತಿಯನ್ನು ತಿಂಗಳಿಗೆ ₹15,000ರಿಂದ ₹25,000ಕ್ಕೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಹೊಸ ನಿಯಮದಂತೆ, ತಿಂಗಳಿಗೆ ₹25,000ವರೆಗೆ ವೇತನ ಪಡೆಯುವ ಉದ್ಯೋಗಿಗಳು PF ವ್ಯಾಪ್ತಿಗೆ ಬರಲಿದ್ದಾರೆ. ಇದರಿಂದ ₹15,000ರಿಂದ ₹25,000 ವೇತನ ಪಡೆಯುತ್ತಿರುವ ಸುಮಾರು 51 ಲಕ್ಷ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.

ಈ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ವಾರ್ಷಿಕವಾಗಿ ಸುಮಾರು ₹11,339 ಕೋಟಿ ವೆಚ್ಚವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಇದು ಉದ್ಯೋಗಿಗಳ ಬಹುಕಾಲದ ಬೇಡಿಕೆಯಾಗಿದ್ದು, ಇಂದಿನ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಮಂತ್ರಿ ಅನುಮೋದನೆ ನೀಡಿದ್ದಾರೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.


Advertisement

Recent Posts

error: Content is protected !!
Scroll to Top