FD Backed Credit Card | ಸಿಬಿಲ್ ಸ್ಕೋರ್ ಕಡಿಮೆ ಇದ್ದು ಕ್ರೆಡಿಟ್ ಕಾರ್ಡ್ ಸಿಗುತ್ತಿಲ್ಲವೇ? ಈ ವಿಧಾನ ಪ್ರಯತ್ನಿಸಿ! Kannadigara vani


ಲೋನ್ ಅಥವಾ ಕ್ರೆಡಿಟ್ ಕಾರ್ಡ್‌ನ EMI ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು. ಇದರಿಂದ ಮುಂದೆ ಕ್ರೆಡಿಟ್ ಕಾರ್ಡ್ ಅಥವಾ ಲೋನ್ ಪಡೆಯಲು ಕಷ್ಟವಾಗಬಹುದು.

ಆದರೆ ಇದನ್ನು ಸರಿಪಡಿಸಿಕೊಳ್ಳಲು ಒಂದು ಸರಳ ಮಾರ್ಗವಿದೆ. 👇

FD-ಬ್ಯಾಕ್ಡ್ ಕ್ರೆಡಿಟ್ ಕಾರ್ಡ್!

  1. ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ, ನೀವು FD ಮಾಡಿ ಅದರ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ಪಡೆಯಬಹುದು.
  2. ಉದಾಹರಣೆಗೆ, ನೀವು ₹10,000 FD ಮಾಡಿದರೆ, ಆ FD ಮೇಲೆ ಬ್ಯಾಂಕ್ ನಿಯಮದ ಪ್ರಕಾರ ಬಡ್ಡಿಯೂ ಸಿಗುತ್ತದೆ. ಜೊತೆಗೆ FD ಮೊತ್ತದ ನಿರ್ದಿಷ್ಟ ಶೇಕಡಾವಾರು ಮೊತ್ತವನ್ನು ಕ್ರೆಡಿಟ್ ಕಾರ್ಡ್ ಮಿತಿಯಾಗಿ ಬಳಸಬಹುದು.
  3. ಉದಾಹರಣೆಗೆ 80% ಮಿತಿ ಇದ್ದರೆ, ₹10,000 FDಗೆ ಸುಮಾರು ₹8,000 ಕ್ರೆಡಿಟ್ ಮಿತಿ ಸಿಗಬಹುದು.
  4. ಈ ಕಾರ್ಡ್ ಅನ್ನು ಜವಾಬ್ದಾರಿಯಿಂದ ಬಳಸಿ, ಪ್ರತಿ ತಿಂಗಳು ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಸಂಪೂರ್ಣವಾಗಿ ಪಾವತಿಸಿ. ಹೀಗೆ ಮಾಡಿದರೆ ನಿಮ್ಮ ಕ್ರೆಡಿಟ್ ಇತಿಹಾಸ ಸುಧಾರಿಸಲು ಸಹಾಯವಾಗಬಹುದು.
  5. ನಂತರ ನಿಮ್ಮ ಸಿಬಿಲ್ ಸ್ಕೋರ್ ಸುಧಾರಿಸಿ, ಸಾಮಾನ್ಯ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಹತೆ ಬಂದಾಗ, FD-ಬ್ಯಾಕ್ಡ್ ಕಾರ್ಡ್ ಅನ್ನು ಮುಚ್ಚಿ FD ಹಣವನ್ನು ನಿಯಮಗಳ ಪ್ರಕಾರ ವಾಪಸ್ ಪಡೆಯಬಹುದು.

ಗಮನದಲ್ಲಿರಲಿ: ಲೈಫ್‌ಟೈಮ್ ಫ್ರೀ ಅಥವಾ ಕಡಿಮೆ ಶುಲ್ಕದ ಕಾರ್ಡ್‌ಗಳಿಗೆ ಆದ್ಯತೆ ನೀಡಿ. FD-ಬ್ಯಾಕ್ಡ್ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡುವಾಗ ಬ್ಯಾಂಕ್‌ನ ನಿಯಮಗಳು, ಬಡ್ಡಿದರ, ಕ್ರೆಡಿಟ್ ಮಿತಿ ಮತ್ತು ಶುಲ್ಕಗಳನ್ನು ಪರಿಶೀಲಿಸಿ.

ಉದಾಹರಣೆಗೆ ಕೆಳಗಿನ FD-ಬ್ಯಾಕ್ಡ್ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಗಣಿಸಬಹುದು:


Advertisement

Recent Posts

error: Content is protected !!
Scroll to Top