Nitin Gadkari on Bike Taxi | ಬೈಕ್ ಟ್ಯಾಕ್ಸಿ ಪರ ಗಡ್ಕರಿ ಬ್ಯಾಟಿಂಗ್; 8 ಕೋಟಿ ಉದ್ಯೋಗದ ಭರವಸೆ! Kannadigara Vani


ನವದೆಹಲಿ: ದೇಶದ ಎಲ್ಲಾ ರಾಜ್ಯ ಸರ್ಕಾರಗಳು ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ ನೀಡಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಕರೆ ನೀಡಿದ್ದಾರೆ.

ಬೈಕ್ ಟ್ಯಾಕ್ಸಿ ಸೇವೆಯಿಂದ ದೇಶದಲ್ಲಿ ಈಗಾಗಲೇ ಸುಮಾರು 4 ಕೋಟಿ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ. ರಾಪಿಡೋ ಸಂಸ್ಥೆಯೊಂದೇ ಸುಮಾರು 2.5 ಕೋಟಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಎಲ್ಲಾ ರಾಜ್ಯಗಳಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿದರೆ ಉದ್ಯೋಗ ಸೃಷ್ಟಿಗೆ ಮತ್ತಷ್ಟು ಉತ್ತೇಜನ ದೊರೆಯಲಿದ್ದು, ಸುಮಾರು 8 ಕೋಟಿ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಜೊತೆಗೆ, ನಗರ ಸಾರಿಗೆ ವ್ಯವಸ್ಥೆಗೆ ಬೈಕ್ ಟ್ಯಾಕ್ಸಿಗಳು ಮತ್ತಷ್ಟು ವೇಗ ನೀಡಲಿವೆ ಎಂಬ ಅಭಿಪ್ರಾಯವನ್ನು ಗಡ್ಕರಿ ವ್ಯಕ್ತಪಡಿಸಿದ್ದಾರೆ.


Advertisement

Recent Posts

error: Content is protected !!
Scroll to Top