Mysore News | ಮೈಸೂರಿನಲ್ಲಿ ವಿಪ್ರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ


ಮೈಸೂರಿನಲ್ಲಿ ವಿಪ್ರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ 2ನೇ ಪಿಯುಸಿ ಹಾಗೂ ಪೋಸ್ಟ್ ಪಿಯುಸಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕಾಗಿ ಆದರ್ಶ ಸೇವಾ ಸಂಘ ಮೈಸೂರು ಅರ್ಜಿ ಆಹ್ವಾನಿಸಿದೆ. ವಿಪ್ರ ಸಮುದಾಯಕ್ಕೆ ಸೇರಿದ ಹಾಗೂ 2026ರ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಶೇ.90ರಷ್ಟು ಅಂಕ ಗಳಿಸಿರುವ, ಕುಟುಂಬದ ವಾರ್ಷಿಕ ಆದಾಯ ₹4 ಲಕ್ಷ ಮೀರದ ಆದರ್ಶ ಸೇವಾ ಸಂಘದ ಸದಸ್ಯರ ಮಕ್ಕಳಿಗೆ ಈ ವಿದ್ಯಾರ್ಥಿವೇತನ ಲಭ್ಯವಿದೆ. ಅರ್ಹ ವಿದ್ಯಾರ್ಥಿಗಳು ಇತ್ತೀಚಿನ ಅಂಕಪಟ್ಟಿ ಹಾಗೂ ಟಿ.ಸಿ.ಯೊಂದಿಗೆ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 7ರವರೆಗೆ ಪ್ರತಿದಿನ ಸಂಜೆ 5ರಿಂದ 6.30ರವರೆಗೆ ಅರ್ಜಿ ಪಡೆಯಬಹುದು.


Advertisement

Recent Posts

error: Content is protected !!
Scroll to Top