ಎಲ್.ಎನ್. ರಾವ್ ಅವರ ಏಕವ್ಯಕ್ತಿ ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಚಾಲನೆ | Kannadigara Vani


ಬೆಂಗಳೂರು: ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ವತಿಯಿಂದ ಬೆಂಗಳೂರಿನ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಆಯೋಜಿಸಲಾಗಿರುವ ನಾಡಿನ ಹಿರಿಯ ವ್ಯಂಗ್ಯಚಿತ್ರಕಾರ ಎಲ್.ಎನ್. ರಾವ್ ಅವರ ಏಕವ್ಯಕ್ತಿ ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಸೆಪ್ಟೆಂಬರ್ 5ರಂದು ಚಾಲನೆ ನೀಡಲಾಯಿತು.

ಖ್ಯಾತ ಚಿತ್ರಕಲಾವಿದ ಗಣಪತಿ ಎಸ್. ಹೆಗಡೆ ಅವರು ದೀಪ ಬೆಳಗಿಸುವ ಮೂಲಕ ಪ್ರದರ್ಶನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷ ವೈ.ಎಸ್. ನಂಜುಂಡಸ್ವಾಮಿ, ಉಪಾಧ್ಯಕ್ಷ ಬಾಬು ಜತ್ತಕರ್, ಕಾರ್ಯದರ್ಶಿ ಜಿ.ಎಸ್. ನಾಗನಾಥ್, ವ್ಯಂಗ್ಯಚಿತ್ರಕಾರ ಎಲ್.ಎನ್. ರಾವ್ ಹಾಗೂ ಶಾಲಿನಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಗಳಾಗಿ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ಮುಖ್ಯಸ್ಥ ವಿ.ಜಿ. ನರೇಂದ್ರ, ಸಂಘದ ಮುಖ್ಯ ಪೋಷಕ ಬಿ.ಜಿ. ಗುಜ್ಜಾರಪ್ಪ, ಖ್ಯಾತ ವ್ಯಂಗ್ಯಚಿತ್ರಕಾರ ಸುಬ್ರಹ್ಮಣ್ಯ ಸೇರಿದಂತೆ ಹಲವು ವ್ಯಂಗ್ಯಚಿತ್ರಕಾರರು ಭಾಗವಹಿಸಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.

ಹಿರಿಯ ವ್ಯಂಗ್ಯಚಿತ್ರಕಾರ ಎಲ್.ಎನ್. ರಾವ್ ಅವರ ಕಲಾ ಪಯಣ ಹಾಗೂ ವಿಶಿಷ್ಟ ವ್ಯಂಗ್ಯಚಿತ್ರಗಳ ಪರಿಚಯವನ್ನು ನೀಡುವ ಈ ಪ್ರದರ್ಶನವು ಸೆಪ್ಟೆಂಬರ್ 19ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಲಿದೆ.


Advertisement

Recent Posts

error: Content is protected !!
Scroll to Top