Sri Sri Vidhushekhara Bharati Mahaswamiji | ಬದರಿನಾಥ ವಿಗ್ರಹ ಪುನಃ ಪ್ರತಿಷ್ಠಾಪಿಸಿದ ಶಂಕರಾಚಾರ್ಯರು: ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ | Kannadigara Vani


ಬದರಿನಾಥ ಕ್ಷೇತ್ರದಲ್ಲಿ ಇಂದು ಭಕ್ತರು ದರ್ಶನ ಪಡೆಯುತ್ತಿರುವ ಬದರಿನಾರಾಯಣನ ವಿಗ್ರಹವನ್ನು ಶಂಕರ ಭಗವತ್ಪಾದಾಚಾರ್ಯರು ಪುನಃ ಪ್ರತಿಷ್ಠಾಪಿಸಿದರು ಎಂದು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ತಿಳಿಸಿದರು.

ಶಂಕರ ಭಗವತ್ಪಾದಾಚಾರ್ಯರು ತಮ್ಮ ಯಾತ್ರೆಯ ಸಂದರ್ಭದಲ್ಲಿ ಬದರಿನಾಥ ಕ್ಷೇತ್ರಕ್ಕೆ ತೆರಳಿದಾಗ ದೇವಸ್ಥಾನದಲ್ಲಿ ಬದರಿನಾರಾಯಣನ ವಿಗ್ರಹ ಇರಲಿಲ್ಲ. ಈ ಕುರಿತು ಅಲ್ಲಿನ ಅರ್ಚಕರನ್ನು ವಿಚಾರಿಸಿದಾಗ, ಪರಕೀಯರ ಆಕ್ರಮಣದ ಸಂದರ್ಭದಲ್ಲಿ ವಿಗ್ರಹವನ್ನು ತೆಗೆದುಕೊಂಡು ಹೋಗಿ ಸಮೀಪದಲ್ಲಿದ್ದ ತೀರ್ಥದಲ್ಲಿ ಹಾಕಲಾಗಿತ್ತು ಎಂದು ತಿಳಿಸಿದರು.

ತೀರ್ಥವು ಅತ್ಯಂತ ಆಳವಾಗಿದ್ದು, ಅಲ್ಲಿನ ತೀವ್ರ ಚಳಿಯ ಕಾರಣದಿಂದಾಗಿ ನೀರಿನೊಳಗೆ ಇಳಿದು ವಿಗ್ರಹವನ್ನು ಹೊರತೆಗೆಯಲು ಯಾರಿಗೂ ಸಾಧ್ಯವಾಗಿರಲಿಲ್ಲ ಎಂದು ಅರ್ಚಕರು ತಿಳಿಸಿದರು.

ಈ ಸಂದರ್ಭದಲ್ಲಿ ಶಂಕರ ಭಗವತ್ಪಾದಾಚಾರ್ಯರೇ ತೀರ್ಥದೊಳಗೆ ಇಳಿದು ಬದರಿನಾರಾಯಣನ ವಿಗ್ರಹವನ್ನು ಹುಡುಕಿ ಹೊರತೆಗೆದು, ಬಳಿಕ ಅದನ್ನು ಬದರಿನಾಥ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾಪಿಸಿದರು ಎಂದು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ವಿವರಿಸಿದರು.


Advertisement

Recent Posts

error: Content is protected !!
Scroll to Top