Author name: kannadigaravani@gmail.com

Finance News / ಹಣಕಾಸು

Credit Score | ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳಲು 7 ಸರಳ ಸಲಹೆಗಳು | Kannadigara Vani

1️⃣ ಸಾಲದ ಕಂತು ಮತ್ತು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಪಾವತಿಸಿಯಾವುದೇ ಪಾವತಿ ತಡವಾಗದಂತೆ ನೋಡಿಕೊಳ್ಳಿ. 2️⃣ ಕ್ರೆಡಿಟ್ ಕಾರ್ಡ್ ಬಳಕೆಯನ್ನು 30% ಒಳಗೆ ಇಡಿನಿಮ್ಮ ಕ್ರೆಡಿಟ್ ಮಿತಿ ₹1 ಲಕ್ಷ ಇದ್ದರೆ, ಸಾಧ್ಯವಾದಷ್ಟು ₹30,000 ಒಳಗೆ ಬಳಸಿ. 3️⃣ ಅನಗತ್ಯ ಸಾಲ ಮಾಡಬೇಡಿಅಗತ್ಯವಿದ್ದಾಗ ಮಾತ್ರ ಸಾಲ ಅಥವಾ ಕಂತಿನ ಸಾಲ ಪಡೆಯಿರಿ. 4️⃣ ಕ್ರೆಡಿಟ್ ಕಾರ್ಡ್ ಸಿಗದಿದ್ದರೆ ಭದ್ರತಾ ಠೇವಣಿ ಆಧಾರಿತ ಕಾರ್ಡ್ ಪಡೆಯಬಹುದುಠೇವಣಿ ಇಟ್ಟುಕೊಂಡು ಕಾರ್ಡ್ ಪಡೆದು, ಸರಿಯಾಗಿ ಬಳಸಿ ಸಮಯಕ್ಕೆ ಪಾವತಿಸಿ. 5️⃣ ಪದೇಪದೇ ಹೊಸ ಸಾಲಕ್ಕೆ ಅರ್ಜಿ ಸಲ್ಲಿಸಬೇಡಿಅಗತ್ಯವಿದ್ದಾಗ ಮಾತ್ರ ಹೊಸ ಸಾಲ ಅಥವಾ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ. 6️⃣ ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಪರಿಶೀಲಿಸಬಹುದುನೀವೇ ನಿಮ್ಮ ಸ್ಕೋರ್ ಪರಿಶೀಲಿಸುವುದರಿಂದ ಸಾಮಾನ್ಯವಾಗಿ ಸ್ಕೋರ್ ಕಡಿಮೆಯಾಗುವುದಿಲ್ಲ. 7️⃣ ಹಳೆಯ ಕ್ರೆಡಿಟ್ ಕಾರ್ಡ್‌ಗಳನ್ನು ಅನಗತ್ಯವಾಗಿ ಮುಚ್ಚಬೇಡಿಹಳೆಯ ಕಾರ್ಡ್ ನಿಮ್ಮ ಕ್ರೆಡಿಟ್ ಇತಿಹಾಸಕ್ಕೆ ಸಹಾಯ ಮಾಡಬಹುದು. 💡 ಮುಖ್ಯವಾಗಿ: ಸಾಲದ ಕಂತುಗಳನ್ನು ಸಮಯಕ್ಕೆ ಪಾವತಿಸಿ, ಕ್ರೆಡಿಟ್ ಕಾರ್ಡ್ ಬಳಕೆಯನ್ನು ಕಡಿಮೆ ಇಡಿ ಮತ್ತು ಅನಗತ್ಯ ಸಾಲಗಳನ್ನು ತಪ್ಪಿಸಿ. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕ್ರಮೇಣ ಉತ್ತಮವಾಗಬಹುದು.

Political News, Popular News

GDP | ಭಾರತದ ಆರ್ಥಿಕತೆಗೆ ಮತ್ತೊಂದು ಬಲ: ಮೊದಲ ತ್ರೈಮಾಸಿಕದಲ್ಲೇ 7.8% GDP ಬೆಳವಣಿಗೆ! Kannadigara Vani

ಭಾರತದ ಆರ್ಥಿಕತೆಗೆ ಮತ್ತೊಂದು ಬಲ: ಮೊದಲ ತ್ರೈಮಾಸಿಕದಲ್ಲೇ 7.8% GDP ಬೆಳವಣಿಗೆ! ನವದೆಹಲಿ: 2026-27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (Q1) ಭಾರತದ ಒಟ್ಟು ದೇಶೀಯ ಉತ್ಪನ್ನ (GDP) 7.8% ಬೆಳವಣಿಗೆ ದಾಖಲಿಸಿದ್ದು, ದೇಶದ ಆರ್ಥಿಕ ಪ್ರಗತಿಗೆ ಮತ್ತಷ್ಟು ವೇಗ ದೊರೆತಿದೆ. ಈ ಬೆಳವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತಿಸಿದ್ದು, “ಅಭಿವೃದ್ಧಿಯನ್ನು ನಿರೀಕ್ಷಿಸದವರು ಮತ್ತೆ ನಿರಾಶರಾದರು; ಭಾರತ ಮತ್ತೊಮ್ಮೆ ಅರಳಿದೆ” ಎಂಬ ಅರ್ಥದ ಮೂಲಕ ಭಾರತದ ಆರ್ಥಿಕ ಸಾಮರ್ಥ್ಯವನ್ನು ಬಣ್ಣಿಸಿದ್ದಾರೆ. 7.8% GDP ಬೆಳವಣಿಗೆಯೊಂದಿಗೆ ಭಾರತದ ಬೆಳವಣಿಗೆಯ ಪಯಣಕ್ಕೆ ಮತ್ತೊಂದು ಬಲಿಷ್ಠ ಆರಂಭ ಸಿಕ್ಕಿದೆ. 📈🇮🇳

Finance News / ಹಣಕಾಸು

Credit Card | ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಾದರೆ ಈ ಮಾಹಿತಿ ನಿಮಗಾಗಿ! Kannadigara Vani

ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಾದರೆ ಈ ಮಾಹಿತಿ ನಿಮಗಾಗಿ! 1) ಸಣ್ಣ ಪಾವತಿಗಳಿಗೆ ಸಾಧ್ಯವಾದಷ್ಟು ಯುಪಿಐ ಕ್ರೆಡಿಟ್ ಕಾರ್ಡ್ ಬಳಸಿ. 5–8% ವರೆಗೆ ಹಣ ಹಿಂತಿರುಗುವ ಲಾಭ ಪಡೆಯಬಹುದು.2) ಮೊಬೈಲ್, ಟಿವಿ ಮುಂತಾದ ದುಬಾರಿ ವಸ್ತುಗಳನ್ನು ಖರೀದಿಸುವಾಗ ಕ್ರೆಡಿಟ್ ಕಾರ್ಡ್ ಬಳಸಿ. 2–5% ವರೆಗೆ ಹಣ ಹಿಂತಿರುಗುವ ಲಾಭ ಸಿಗಬಹುದು.3) ದೊಡ್ಡ ಖರೀದಿಗೆ ಬಡ್ಡಿಯಿಲ್ಲದ ಕಂತು ಪಾವತಿ ಇದ್ದರೆ ಆಯ್ಕೆ ಮಾಡಬಹುದು. ಆದರೆ ಯಾವುದೇ ಹೆಚ್ಚುವರಿ ಶುಲ್ಕವಿದೆಯೇ ಎಂದು ಪರಿಶೀಲಿಸಿ.4) ಸುಲಭವಾಗಿ ನಿರ್ವಹಿಸಲು ಅಗತ್ಯವಿರುವಷ್ಟು ಕ್ರೆಡಿಟ್ ಕಾರ್ಡ್‌ಗಳನ್ನು ಮಾತ್ರ ಬಳಸಿ. ಹೆಚ್ಚು ಕಾರ್ಡ್‌ಗಳಿದ್ದರೆ ನಿರ್ವಹಣೆ ಕಷ್ಟವಾಗಬಹುದು.5) ಹೆಚ್ಚು ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಮಾತ್ರ ಸಾಲದ ಅಂಕೆ ಹೆಚ್ಚಾಗುವುದಿಲ್ಲ. ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸುವುದು ಮುಖ್ಯ.6) ₹25,000ಕ್ಕಿಂತ ಹೆಚ್ಚು ಸಂಬಳ ಇದ್ದರೆ ಮಾತ್ರ ಕ್ರೆಡಿಟ್ ಕಾರ್ಡ್ ಬಳಸಬೇಕು ಎಂಬ ನಿಯಮವಿಲ್ಲ. ನಿಮ್ಮ ಆದಾಯಕ್ಕೆ ತಕ್ಕಂತೆ ಬಳಸಿ.7) ಕ್ರೆಡಿಟ್ ಕಾರ್ಡ್ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿದ್ದರೆ, ಮೊದಲು ತಿಳಿದುಕೊಂಡು ನಂತರ ಬಳಸಿ. ಜಾಸ್ತಿಯಾದರೆ ಅಮೃತವೂ ವಿಷ! ಕ್ರೆಡಿಟ್ ಕಾರ್ಡ್ ಅನ್ನು ಮಿತಿಯಲ್ಲಿ ಬಳಸಿ. ಎಲ್ಲವೂ ನಮ್ಮ ಅಳತೆಯಲ್ಲೇ ಇರಲಿ!

Finance News / ಹಣಕಾಸು

FD Backed Credit Card | ಸಿಬಿಲ್ ಸ್ಕೋರ್ ಕಡಿಮೆ ಇದ್ದು ಕ್ರೆಡಿಟ್ ಕಾರ್ಡ್ ಸಿಗುತ್ತಿಲ್ಲವೇ? ಈ ವಿಧಾನ ಪ್ರಯತ್ನಿಸಿ! Kannadigara vani

ಲೋನ್ ಅಥವಾ ಕ್ರೆಡಿಟ್ ಕಾರ್ಡ್‌ನ EMI ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಪರಿಣಾಮ ಬೀರಬಹುದು. ಇದರಿಂದ ಮುಂದೆ ಕ್ರೆಡಿಟ್ ಕಾರ್ಡ್ ಅಥವಾ ಲೋನ್ ಪಡೆಯಲು ಕಷ್ಟವಾಗಬಹುದು. ಆದರೆ ಇದನ್ನು ಸರಿಪಡಿಸಿಕೊಳ್ಳಲು ಒಂದು ಸರಳ ಮಾರ್ಗವಿದೆ. 👇 FD-ಬ್ಯಾಕ್ಡ್ ಕ್ರೆಡಿಟ್ ಕಾರ್ಡ್! ಗಮನದಲ್ಲಿರಲಿ: ಲೈಫ್‌ಟೈಮ್ ಫ್ರೀ ಅಥವಾ ಕಡಿಮೆ ಶುಲ್ಕದ ಕಾರ್ಡ್‌ಗಳಿಗೆ ಆದ್ಯತೆ ನೀಡಿ. FD-ಬ್ಯಾಕ್ಡ್ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡುವಾಗ ಬ್ಯಾಂಕ್‌ನ ನಿಯಮಗಳು, ಬಡ್ಡಿದರ, ಕ್ರೆಡಿಟ್ ಮಿತಿ ಮತ್ತು ಶುಲ್ಕಗಳನ್ನು ಪರಿಶೀಲಿಸಿ. ಉದಾಹರಣೆಗೆ ಕೆಳಗಿನ FD-ಬ್ಯಾಕ್ಡ್ ಕ್ರೆಡಿಟ್ ಕಾರ್ಡ್‌ಗಳನ್ನು ಪರಿಗಣಿಸಬಹುದು:

Finance News / ಹಣಕಾಸು

Life Time Free Credit Card | ಲೈಫ್‌ಟೈಮ್ ಫ್ರೀ ಕ್ರೆಡಿಟ್ ಕಾರ್ಡ್ ಎಂದರೇನು? Kannadigara Vani

ಇತ್ತೀಚಿನ ದಿನಗಳಲ್ಲಿ ಗ್ರಾಹಕರನ್ನು ಆಕರ್ಷಿಸಲು ಹಲವು ಬ್ಯಾಂಕ್‌ಗಳು ಮತ್ತು ಕೆಲವು ಆ್ಯಪ್‌ಗಳು ಲೈಫ್‌ಟೈಮ್ ಫ್ರೀ ಕ್ರೆಡಿಟ್ ಕಾರ್ಡ್ ನೀಡುತ್ತಿವೆ. 👇 ಕೆಳಗಿನ ಲಿಂಕ್‌ಗಳ ಮೂಲಕ ಲೈಫ್‌ಟೈಮ್ ಫ್ರೀ ಕ್ರೆಡಿಟ್ ಕಾರ್ಡ್‌ಗಳ ಬಗ್ಗೆ ಮಾಹಿತಿ ಪಡೆಯಬಹುದು.

Finance News / ಹಣಕಾಸು

Credit Card | ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವ ಮುನ್ನ ತಪ್ಪದೇ ಪಾಲಿಸಬೇಕಾದ ನಿಯಮಗಳು!

1️⃣ ಎಲ್ಲಾ ಬಾಕಿ ಹಣ ಪಾವತಿಸಿಮೊದಲಿಗೆ ಕ್ರೆಡಿಟ್ ಕಾರ್ಡ್‌ನಲ್ಲಿರುವ ಎಲ್ಲಾ ಬಾಕಿ ಮೊತ್ತವನ್ನು ಸಂಪೂರ್ಣವಾಗಿ ಕ್ಲಿಯರ್ ಮಾಡಿ. ಒಂದು ರೂಪಾಯಿ ಬಾಕಿಯಿದ್ದರೂ ಉಳಿಸಬೇಡಿ. 2️⃣ ಹೆಚ್ಚುವರಿ ಹಣವಿದ್ದರೆ ವಾಪಸ್ ಪಡೆಯಿರಿಅಗತ್ಯಕ್ಕಿಂತ ಹೆಚ್ಚು ಹಣವನ್ನು ರಿಪೇಮೆಂಟ್ ಮಾಡಿದ್ದರೆ, ಕಾರ್ಡ್ ಕ್ಲೋಸ್ ಮಾಡುವ ಮುನ್ನ ಆ ಹೆಚ್ಚುವರಿ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಟ್ರಾನ್ಸ್‌ಫರ್ ಮಾಡಿಸಿಕೊಳ್ಳಿ. 3️⃣ ಕಸ್ಟಮರ್ ಕೇರ್‌ನಲ್ಲಿ ಖಚಿತಪಡಿಸಿಕೊಳ್ಳಿಕಾರ್ಡ್ ಕ್ಲೋಸ್ ಮಾಡುವ ಮೊದಲು ಕಸ್ಟಮರ್ ಕೇರ್‌ಗೆ ಕರೆ ಮಾಡಿ ಯಾವುದೇ ಪೆಂಡಿಂಗ್ ಬಿಲ್, ಚಾರ್ಜ್ ಅಥವಾ ಬಾಕಿ ವಹಿವಾಟು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. 4️⃣ ರಿವಾರ್ಡ್ ಪಾಯಿಂಟ್ಸ್ ಬಳಸಿನಿಮ್ಮ ಕ್ರೆಡಿಟ್ ಕಾರ್ಡ್‌ನಲ್ಲಿರುವ ರಿವಾರ್ಡ್ ಪಾಯಿಂಟ್ಸ್‌ಗಳನ್ನು ಕಾರ್ಡ್ ಕ್ಲೋಸ್ ಮಾಡುವ ಮುನ್ನವೇ ರಿಡೀಮ್ ಮಾಡಿಕೊಳ್ಳಿ. ಕಾರ್ಡ್ ಕ್ಲೋಸ್ ಆದ ನಂತರ ಅವುಗಳನ್ನು ಬಳಸಲು ಸಾಧ್ಯವಾಗದಿರಬಹುದು. 5️⃣ ಆಟೋ ಪೇಮೆಂಟ್‌ಗಳನ್ನು ಕ್ಯಾನ್ಸಲ್ ಮಾಡಿಕ್ರೆಡಿಟ್ ಕಾರ್ಡ್‌ಗೆ ಲಿಂಕ್ ಮಾಡಿರುವ EMI, OTT, ಮೊಬೈಲ್, ವಿದ್ಯುತ್ ಬಿಲ್ ಅಥವಾ ಇತರ ಯಾವುದೇ ಆಟೋ ಪೇಮೆಂಟ್‌ಗಳನ್ನು ಕ್ಯಾನ್ಸಲ್/ಬೇರೆ ಪಾವತಿ ವಿಧಾನಕ್ಕೆ ಬದಲಾಯಿಸಿ. 6️⃣ ಭವಿಷ್ಯದಲ್ಲಿ ಮತ್ತೆ ಕಾರ್ಡ್ ಪಡೆಯಬಹುದೇ?ಕೆಲವು ಬ್ಯಾಂಕ್‌ಗಳಲ್ಲಿ ಒಮ್ಮೆ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡಿದ ನಂತರ ಅದೇ ಕಾರ್ಡ್ ಅಥವಾ ಕಾರ್ಡ್ ವೇರಿಯಂಟ್‌ನ್ನು ಮತ್ತೆ ಪಡೆಯುವುದು ಕಷ್ಟವಾಗಬಹುದು. ಆದ್ದರಿಂದ ಕ್ಲೋಸ್ ಮಾಡುವ ಮುನ್ನ ಬ್ಯಾಂಕ್‌ನಿಂದ ಈ ಬಗ್ಗೆ ಖಚಿತಪಡಿಸಿಕೊಳ್ಳಿ. 7️⃣ CIBIL ಸ್ಕೋರ್ ಮೇಲೆ ಪರಿಣಾಮ ಗಮನಿಸಿಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವುದರಿಂದ ನಿಮ್ಮ ಒಟ್ಟು ಕ್ರೆಡಿಟ್ ಲಿಮಿಟ್ ಮತ್ತು ಕ್ರೆಡಿಟ್ ಬಳಕೆಯ ಅನುಪಾತ ಬದಲಾಗಬಹುದು. ಇದರಿಂದ ಕೆಲವೊಮ್ಮೆ CIBIL ಸ್ಕೋರ್ ಮೇಲೆ ಪರಿಣಾಮ ಬೀರಬಹುದು. 👉 ಆದ್ದರಿಂದ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವ ಮುನ್ನ ಮೇಲಿನ ಎಲ್ಲಾ ಅಂಶಗಳನ್ನು ಒಮ್ಮೆ ಪರಿಶೀಲಿಸಿ.

Bangalore News / ಬೆಂಗಳೂರು ಸುದ್ದಿ, Karntaka Politics, Political News, Uncategorized

PM Narendra Modi | ಪಿಎಂ ಸ್ವನಿಧಿಯಿಂದ ನಿಂಗಮ್ಮ ಅವರ ವ್ಯಾಪಾರಕ್ಕೆ ಹೊಸ ಚೈತನ್ಯ

ಬೆಂಗಳೂರು: ಪಿಎಂ ಸ್ವನಿಧಿ ಯೋಜನೆಯ ನೆರವಿನಿಂದ ಬೆಂಗಳೂರಿನ ಬೀದಿ ವ್ಯಾಪಾರಿ ಟಿ.ಎಸ್. ನಿಂಗಮ್ಮ ಅವರು ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಂಡಿದ್ದಾರೆ. ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ನಿಂಗಮ್ಮ ಅವರ ಯಶೋಗಾಥೆಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ. ನಿಂಗಮ್ಮ ಅವರು ಆರಂಭದಲ್ಲಿ ₹10,000 ಸಾಲ ಪಡೆದು, ಬಳಿಕ ₹20,000 ಹಾಗೂ ₹50,000 ಸಾಲ ಪಡೆದು ವ್ಯಾಪಾರವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಿದ್ದಾರೆ. ಸಾಲವನ್ನು ಸಕಾಲದಲ್ಲಿ ಮರುಪಾವತಿಸುವ ಮೂಲಕ ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಂಡಿದ್ದಾರೆ. ನಿಂಗಮ್ಮ ಅವರ ಯಶೋಗಾಥೆ ಪಿಎಂ ಸ್ವನಿಧಿ ಯೋಜನೆಯ ಪ್ರಯೋಜನ ಪಡೆದ ಬೀದಿ ವ್ಯಾಪಾರಿಗಳಿಗೆ ಉತ್ತಮ ಉದಾಹರಣೆಯಾಗಿದೆ.

Bangalore News / ಬೆಂಗಳೂರು ಸುದ್ದಿ, Kannada Cinema / ಸಿನಿಮಾ ಸುದ್ದಿ

Kiccha Sudeepa | ತಾಯಿಯ ಪುಣ್ಯಸ್ಮರಣೆಗೆ ಕಿಚ್ಚನ ಅರ್ಥಪೂರ್ಣ ಸೇವೆ: 4 ಬಡ ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾ ದಾನ!

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ತಮ್ಮ ತಾಯಿಯ ಪುಣ್ಯಸ್ಮರಣೆಯ ಪ್ರಯುಕ್ತ ನಾಲ್ಕು ಬಡ ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾಗಳನ್ನು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಾಯಿಯ ನೆನಪನ್ನು ಸಮಾಜಮುಖಿ ಕಾರ್ಯದ ಮೂಲಕ ಸ್ಮರಿಸಿದ ಸುದೀಪ್ ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಸುದೀಪ್ ಅವರ ಪತ್ನಿ ಹಾಗೂ ಅಳಿಯ ಸಂಚಿತ್ ಸಂಜೀವ್ ಉಪಸ್ಥಿತರಿದ್ದು, ಆಟೋ ರಿಕ್ಷಾಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ತಾಯಿಯ ಮೇಲಿನ ಪ್ರೀತಿಯನ್ನು ಸೇವೆಯ ರೂಪದಲ್ಲಿ ಅರ್ಪಿಸಿದ ಕಿಚ್ಚ ಸುದೀಪ್ ಅವರ ಕಾರ್ಯಕ್ಕೆ ಅಭಿಮಾನಿಗಳು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಮೆಚ್ಚುಗೆಯ ಮಹಾಪೂರವೇ ಹರಿದಿದೆ.

Bangalore News / ಬೆಂಗಳೂರು ಸುದ್ದಿ

Senior Cartoonist L. N. Rao | ಹಿರಿಯ ವ್ಯಂಗ್ಯಚಿತ್ರಕಾರ ಎಲ್ ಎನ್ ರಾವ್ ಅವರಿಗೆ ಜೀವಮಾನದ ಪ್ರಶಸ್ತಿ

ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘವು ಸೆಪ್ಟೆಂಬರ್ ೦೫, ೨೦೨೬, ಶನಿವಾರ, ಬೆಳಿಗ್ಗೆ ೧೧ ಗಂಟೆಗೆ ನಾಡಿನ ಹಿರಿಯ ವ್ಯಂಗ್ಯಚಿತ್ರಕಾರ ಎಲ್.ಎನ್. ರಾವ್ ಅವರ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ಸಹಕಾರವಿದೆ. ಪ್ರಶಸ್ತಿ ಪುರಸ್ಕೃತರ ಪರಿಚಯ: ಲಕ್ಷ್ಮೀ ನಾರಾಯಣ ರಾವ್ ಎಂ. (ಎಲ್.ಎನ್.ರಾವ್) ಕಾಸರಗೋಡು ಜಿಲ್ಲೆಯ ಕುಂಟಾರು. ಉಡುಪಿಯಲ್ಲಿ ಲಾ ಕಲಿತರು. ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ, ಆದರೆ ನಾಡಿಗ್, ಕೆ ಆರ್ ಸ್ವಾಮಿ ಅವರಿಂದ ಪ್ರಭಾವಿತರಾಗಿ ಕಾರ್ಟೂನ್ ರಚನೆ ಆರಂಭಿಸಿದರು. ಮೊಟ್ಟ ಮೊದಲ ಕಾರ್ಟೂನ್ 1980 ರಲ್ಲಿ ಮಯೂರದಲ್ಲಿ ಪ್ರಕಟವಾಯ್ತು. “ನಗೆ ಮುಗುಳು” ಪತ್ರಿಕೆಯ ರಾಜ್ಯಮಟ್ಟದ ಪ್ರಶಸ್ತಿ ಹಾಗೂ ಹಿಂದೂಸ್ತಾನ್ ಟೈಮ್ಸ್ ಅವಾರ್ಡ್ ಗಳಲ್ಲದೇ ಹಲವಾರು ಬಹುಮಾನಗಳು ಲಭ್ಯವಾಗಿವೆ. ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಸದಸ್ಯರಾಗಿದ್ದು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಶ್ರೀಕಾಂತ್ ಸ್ಮರಣಾರ್ಥ ದತ್ತಿ ಪ್ರಶಸ್ತಿತುಮಕೂರಿನ ರಾಜನ್ ಅವರ ಮಗ ಶ್ರೀಕಾಂತ್ ಅವರ ಸ್ಮರಣಾರ್ಥ ದತ್ತಿ ಹಾಗೂ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಸಹ-ಪ್ರಾಯೋಜತ್ವದಲ್ಲಿ ಹತ್ತು ಸಾವಿರ ನಗದು ಸಹಿತ ಜೀವಮಾನದ ಪ್ರಶಸ್ತಿಯ ಪ್ರದಾನ ಮಾಡಲಾಗುತ್ತಿದೆ. ಏಕವ್ಯಕ್ತಿ ಪ್ರದರ್ಶನ: ಇಲ್ಲಿ ಜೀವಮಾನ ಪ್ರಶಸ್ತಿಗೆ ಪಾತ್ರರಾಗುತ್ತಿರುವ ಎಲ್ ಎನ್ ರಾವ್ ಅವರ ಆಯ್ದ ವ್ಯಂಗ್ಯಚಿತ್ರಗಳ ಪ್ರದರ್ಶನವನ್ನೂ ಇದೇ ಸಭಾಂಗಣದಲ್ಲಿ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘವು ಆಯೋಜಿಸಿದೆ. ಈ ಏಕವ್ಯಕ್ತಿ ವ್ಯಂಗ್ಯಚಿತ್ರಗಳ ಪ್ರದರ್ಶನದ ಉದ್ಘಾಟನೆಯನ್ನು ನಾಡಿನ ಹಿರಿಯ ಚಿತ್ರಕಲಾವಿದ ಹಾಗೂ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಕೋಬಾಲ್ಟ್ ಆರ್ಟ್ ಗ್ಯಾಲರಿಯ ಸ್ಥಾಪಕರಾದ ಗಣಪತಿ ಎಸ್. ಹೆಗ್ಡೆ ಅವರು ಮಾಡಲಿದ್ದಾರೆ. ಗೌರವ ಅತಿಥಿಗಳಾಗಿ ನಾಡಿನ ಖ್ಯಾತ ಹಿರಿಯ ವ್ಯಂಗ್ಯಚಿತ್ರಕಾರರು ಹಾಗೂ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿಗಳೂ ಆದ ವ್ಹಿ ಜಿ. ನರೇಂದ್ರ ಅವರು ಆಗಮಿಸಲಿದ್ದಾರೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಧ್ಯಕ್ಷರಾದ ವೈ. ಎಸ್. ನಂಜುಂಡ ಸ್ವಾಮಿ ಅವರು ನಿರ್ವಹಿಸಲಿದ್ದಾರೆ. ಸಂಘದ ಸರ್ವ ಸದಸ್ಯರ ಸಭೆ: ಈ ಸಮಾರಂಭದ ನಂತರ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ವಾರ್ಷಿಕ ಕಾರ್ಯಕಾರಿ ಸಭೆಯೂ ನಡೆಯಲಿದೆ. ಪ್ರಶಸ್ತಿಗೆ ಪಾತ್ರರಾದ ಎಲ್ ಎನ್ ರಾವ್ ಅವರ ಈ ಏಕವ್ಯಕ್ತಿ ವ್ಯಂಗ್ಯಚಿತ್ರ ಪ್ರದರ್ಶನವು ಸೆಪ್ಟೆಂಬರ್ ೧೯, ೨೦೨೬ ರವರೆಗೆ ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿರುತ್ತದೆ. ಸ್ಥಳ: ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ, #೧, ಮಿಡ್‌ಫೋರ್ಡ್ ಹೌಸ್, ಮಿಡ್‌ಫೋರ್ಡ್ ಗಾರ್ಡನ್, ಎಂ.ಜಿ. ರಸ್ತೆ (ಟ್ರಿನಿಟಿ ಮೆಟ್ರೋ ನಿಲ್ದಾಣದ ಪಕ್ಕ) ಬೆಂಗಳೂರು- ೫೬೦೦೦೧

Bangalore News / ಬೆಂಗಳೂರು ಸುದ್ದಿ, Karntaka Politics

Pramod Srinivas | ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಮೋದ್ ಶ್ರೀನಿವಾಸ್ ನೇಮಕ

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲಾ ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಮೋದ್ ಶ್ರೀನಿವಾಸ್ ಅವರನ್ನು ನೇಮಕ ಮಾಡಲಾಗಿದೆ. ಇತ್ತೀಚೆಗಷ್ಟೇ ಪ್ರಮೋದ್ ಶ್ರೀನಿವಾಸ್ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಶಿಷ್ಯ ಬಳಗದಲ್ಲಿ ಗುರುತಿಸಿಕೊಂಡಿದ್ದ ಪ್ರಮೋದ್ ಶ್ರೀನಿವಾಸ್, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಆಂತರಿಕ ಬೆಳವಣಿಗೆಗಳಿಂದ ಅಸಮಾಧಾನಗೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದೀಗ ಮತ್ತೆ ಬಿಜೆಪಿಗೆ ಮರಳಿರುವ ಪ್ರಮೋದ್ ಶ್ರೀನಿವಾಸ್ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದ್ದು, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಪಕ್ಷಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಪ್ರಮುಖ ಜವಾಬ್ದಾರಿ ದೊರೆತಿರುವುದು ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ. ಯುವ ಮೋರ್ಚಾ ಅಧ್ಯಕ್ಷರಾಗಿ ಪ್ರಮೋದ್ ಶ್ರೀನಿವಾಸ್ ಅವರು ಪಕ್ಷದ ಸಂಘಟನೆ ಬಲಪಡಿಸುವಲ್ಲಿ ಹಾಗೂ ಯುವ ಕಾರ್ಯಕರ್ತರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.

error: Content is protected !!
Scroll to Top