Yaduveer Wadiyar | ಕೊಡವಗೂ ಅಧಿಕೃತ ಮಾನ್ಯತೆ ನೀಡಲು ಯದುವೀರ ಒತ್ತಾಯ | Kannadigara Vani
ಕೊಡವ ತಕ್‌ಗೂ ಅಧಿಕೃತ ಮಾನ್ಯತೆ ನೀಡಲು ಯದುವೀರ ಒತ್ತಾಯ ಮೈಸೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ತುಳು ಭಾಷೆಗೆ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವ ಮಾದರಿಯಲ್ಲೇ ಕೊಡವ ತಕ್‌ಗೂ ಸೂಕ್ತ ಮಾನ್ಯತೆ ನೀಡಬೇಕು ಎಂದು ಮೈಸೂರು–ಕೊಡಗು ಲೋಕಸಭಾ ಸದಸ್ಯ ಯದುವೀರ ಕೃಷ್ಣರಾಜ ಒಡೆಯರ್ ಒತ್ತಾಯಿಸಿದ್ದಾರೆ. ಕೊಡವ ತಕ್, ಅರೆಭಾಷೆ ಸೇರಿದಂತೆ ಸ್ಥಳೀಯ ಭಾಷಾ ಪ್ರಭೇದಗಳು ಕರ್ನಾಟಕದ ಶ್ರೀಮಂತ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯ ಭಾಗವಾಗಿವೆ. ಇವುಗಳ ಸಂರಕ್ಷಣೆ, ಅಭಿವೃದ್ಧಿ ಹಾಗೂ ಮುಂದಿನ ಪೀಳಿಗೆಗೆ ವರ್ಗಾವಣೆಗೆ ಸರ್ಕಾರ ಅಗತ್ಯ ಪ್ರೋತ್ಸಾಹ ಮತ್ತು ಮಾನ್ಯತೆ ನೀಡಬೇಕು ಎಂದು ಅವರು ಹೇಳಿದ್ದಾರೆ.










