Mysore News / ಮೈಸೂರು ಸುದ್ದಿ

English News | Kannadigara Vani, Mysore News / ಮೈಸೂರು ಸುದ್ದಿ

Mysuru News | Scholarship Applications Invited for Vipra Students in Mysuru

Scholarship Applications Invited for Vipra Students in Mysuru Adarsha Seva Sangha Mysuru has invited applications for scholarships from students belonging to the Vipra community who are studying in 2nd PUC and Post PUC courses in Mysuru. The scholarship is open to children of Adarsha Seva Sangha members who secured 90% marks in the 2026 examination at the first attempt and whose total family income does not exceed Rs. 4 lakh per year. Eligible students can obtain the prescribed application forms by approaching the Sangha with their latest marks card and Transfer Certificate (TC) between September 28 and October 7, from 5.00 PM to 6.30 PM.

Mysore News / ಮೈಸೂರು ಸುದ್ದಿ

Mysore News | ಮೈಸೂರಿನಲ್ಲಿ ವಿಪ್ರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಮೈಸೂರಿನಲ್ಲಿ ವಿಪ್ರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ 2ನೇ ಪಿಯುಸಿ ಹಾಗೂ ಪೋಸ್ಟ್ ಪಿಯುಸಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿವೇತನಕ್ಕಾಗಿ ಆದರ್ಶ ಸೇವಾ ಸಂಘ ಮೈಸೂರು ಅರ್ಜಿ ಆಹ್ವಾನಿಸಿದೆ. ವಿಪ್ರ ಸಮುದಾಯಕ್ಕೆ ಸೇರಿದ ಹಾಗೂ 2026ರ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಶೇ.90ರಷ್ಟು ಅಂಕ ಗಳಿಸಿರುವ, ಕುಟುಂಬದ ವಾರ್ಷಿಕ ಆದಾಯ ₹4 ಲಕ್ಷ ಮೀರದ ಆದರ್ಶ ಸೇವಾ ಸಂಘದ ಸದಸ್ಯರ ಮಕ್ಕಳಿಗೆ ಈ ವಿದ್ಯಾರ್ಥಿವೇತನ ಲಭ್ಯವಿದೆ. ಅರ್ಹ ವಿದ್ಯಾರ್ಥಿಗಳು ಇತ್ತೀಚಿನ ಅಂಕಪಟ್ಟಿ ಹಾಗೂ ಟಿ.ಸಿ.ಯೊಂದಿಗೆ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 7ರವರೆಗೆ ಪ್ರತಿದಿನ ಸಂಜೆ 5ರಿಂದ 6.30ರವರೆಗೆ ಅರ್ಜಿ ಪಡೆಯಬಹುದು.

Mysore News / ಮೈಸೂರು ಸುದ್ದಿ, Popular News

Ramya Jagath Mysuru | ₹31 ಲಕ್ಷ ಖರ್ಚು ಮಾಡಿ ಸರ್ಕಾರಿ ಶಾಲೆ ಹೈಟೆಕ್ ಮಾಡಿದ ರಮ್ಯಾ ಜಗತ್‌ಗೆ ಅವಮಾನ | Kannadigara Vani

₹31 ಲಕ್ಷ ಖರ್ಚು ಮಾಡಿ ಸರ್ಕಾರಿ ಶಾಲೆ ಹೈಟೆಕ್ ಮಾಡಿದ ರಮ್ಯಾ ಜಗತ್‌ಗೆ ಅವಮಾನ: SDMC ಸ್ಥಾನಕ್ಕೆ ರಾಜೀನಾಮೆ ಮೈಸೂರು: ಕೋಟೆಹುಂಡಿ ಗ್ರಾಮದ ಸರ್ಕಾರಿ ಶಾಲೆಯನ್ನು ದತ್ತು ಪಡೆದು, ಸ್ವಂತ ಹಣದಿಂದ ₹31.24 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿ ಅಭಿವೃದ್ಧಿಪಡಿಸಿದ್ದ ಯೂಟ್ಯೂಬರ್ ಹಾಗೂ ಸಮಾಜ ಸೇವಕಿ ರಮ್ಯಾ ಜಗತ್, ಶಾಲೆಯ ಸಭೆಯಲ್ಲಿ ಅವಮಾನಿಸಿದ ಆರೋಪದ ಹಿನ್ನೆಲೆಯಲ್ಲಿ SDMC ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಲೆಯಿಂದ ಹೊರಬಂದಿದ್ದಾರೆ. ವಿದ್ಯಾರ್ಥಿಗಳಿಗೆ ಸೂಟು-ಬೂಟು, ಬ್ಯಾಗ್, ವಾಟರ್ ಬಾಟಲ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿದ್ದ ಅವರು, ಯೋಗ, ಕರಾಟೆ, ವಿಜ್ಞಾನ, ಸಂಗೀತ, ನೃತ್ಯ ಹಾಗೂ ಸ್ಪೋಕನ್ ಇಂಗ್ಲಿಷ್ ಶಿಕ್ಷಕರಿಗೆ ಸ್ವಂತ ಖರ್ಚಿನಲ್ಲಿ ವೇತನ ನೀಡುತ್ತಿದ್ದರು. ಶಾಲೆಯಲ್ಲಿ 8ನೇ ತರಗತಿ ಆರಂಭಿಸುವ ಪ್ರಸ್ತಾಪ ಮಂಡಿಸಿದ ವೇಳೆ ಕೆಲವರು, “ನಮ್ಮ ಅನುಮತಿ ಇಲ್ಲದೆ ಶಾಲೆ ದತ್ತು ಪಡೆಯಲು ನಿನಗೆ ಯಾರು ಅಧಿಕಾರ ಕೊಟ್ಟರು?” ಎಂದು ಪ್ರಶ್ನಿಸಿ ಅವಮಾನಿಸಿದ್ದಾರೆ ಎಂದು ರಮ್ಯಾ ಆರೋಪಿಸಿದ್ದಾರೆ. ಶಾಲಾ ಸಭಾಂಗಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಟ್ಟಿದ್ದಕ್ಕೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಘಟನೆಯಿಂದ ನೊಂದಿರುವ ರಮ್ಯಾ, ತಮ್ಮ ಮಗನ ಟಿ.ಸಿಗೂ ಅರ್ಜಿ ಸಲ್ಲಿಸಿದ್ದು, ಮುಂದೆಯೂ ಸರ್ಕಾರಿ ಶಾಲೆಗಳಿಗಾಗಿ ಸೇವೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.

Mysore News / ಮೈಸೂರು ಸುದ್ದಿ, Political News, Popular News, Special Stories

Yaduveer Wadiyar | ಕೊಡವಗೂ ಅಧಿಕೃತ ಮಾನ್ಯತೆ ನೀಡಲು ಯದುವೀರ ಒತ್ತಾಯ | Kannadigara Vani

ಕೊಡವ ತಕ್‌ಗೂ ಅಧಿಕೃತ ಮಾನ್ಯತೆ ನೀಡಲು ಯದುವೀರ ಒತ್ತಾಯ ಮೈಸೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ತುಳು ಭಾಷೆಗೆ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡಿರುವ ಮಾದರಿಯಲ್ಲೇ ಕೊಡವ ತಕ್‌ಗೂ ಸೂಕ್ತ ಮಾನ್ಯತೆ ನೀಡಬೇಕು ಎಂದು ಮೈಸೂರು–ಕೊಡಗು ಲೋಕಸಭಾ ಸದಸ್ಯ ಯದುವೀರ ಕೃಷ್ಣರಾಜ ಒಡೆಯರ್ ಒತ್ತಾಯಿಸಿದ್ದಾರೆ. ಕೊಡವ ತಕ್‌, ಅರೆಭಾಷೆ ಸೇರಿದಂತೆ ಸ್ಥಳೀಯ ಭಾಷಾ ಪ್ರಭೇದಗಳು ಕರ್ನಾಟಕದ ಶ್ರೀಮಂತ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯ ಭಾಗವಾಗಿವೆ. ಇವುಗಳ ಸಂರಕ್ಷಣೆ, ಅಭಿವೃದ್ಧಿ ಹಾಗೂ ಮುಂದಿನ ಪೀಳಿಗೆಗೆ ವರ್ಗಾವಣೆಗೆ ಸರ್ಕಾರ ಅಗತ್ಯ ಪ್ರೋತ್ಸಾಹ ಮತ್ತು ಮಾನ್ಯತೆ ನೀಡಬೇಕು ಎಂದು ಅವರು ಹೇಳಿದ್ದಾರೆ.

Karntaka Politics, Mysore News / ಮೈಸೂರು ಸುದ್ದಿ, Political News, Popular News

T Narsipura | ಟಿ. ನರಸೀಪುರದಲ್ಲಿ ಗಣೇಶೋತ್ಸವ ವಿವಾದ: ಪೊಲೀಸ್ ಇನ್ಸ್‌ಪೆಕ್ಟರ್ ಅಮಾನತಿಗೆ ಬಿಜೆಪಿ ಆಗ್ರಹ

ಮೈಸೂರು: ಟಿ. ನರಸೀಪುರದಲ್ಲಿ ಗಣೇಶೋತ್ಸವ ಆಚರಣೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಅವರು ಬೆದರಿಕೆ ಹಾಗೂ ವಿವಿಧ ನಿಬಂಧನೆಗಳನ್ನು ವಿಧಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಸಂಬಂಧಪಟ್ಟ ಪೊಲೀಸ್ ಇನ್ಸ್‌ಪೆಕ್ಟರ್ ಅವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಬ್ಬಣ್ಣ, ಮೈಸೂರು ನಗರ ಜಿಲ್ಲಾಧ್ಯಕ್ಷ ಎಲ್. ನಾಗೇಂದ್ರ ಸೇರಿದಂತೆ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಹಿಂದೂ ಪರ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

Mysore News / ಮೈಸೂರು ಸುದ್ದಿ

Mysore News | ಮೈಸೂರಿನಲ್ಲಿ ‘ದಶ ಸಂಭ್ರಮ 2026’ – ರೋಟರಾಕ್ಟ್ ಜಿಲ್ಲಾ ಸಮ್ಮೇಳನ

ಮೈಸೂರಿನಲ್ಲಿ ‘ದಶ ಸಂಭ್ರಮ 2026’ – ರೋಟರಾಕ್ಟ್ ಜಿಲ್ಲಾ ಸಮ್ಮೇಳನ ಮೈಸೂರು: ರೋಟರಾಕ್ಟ್ ಡಿಸ್ಟ್ರಿಕ್ಟ್ 3181ರ 10ನೇ ವಾರ್ಷಿಕ ಜಿಲ್ಲಾ ಸಮ್ಮೇಳನ ‘ದಶ ಸಂಭ್ರಮ 2026’ ಫೆಬ್ರವರಿ 28 ಮತ್ತು ಮಾರ್ಚ್ 1ರಂದು ಮೈಸೂರಿನ ಟೆರೇಷಿಯನ್ ಕಾಲೇಜಿನಲ್ಲಿ ನಡೆಯಿತು. ನಾಲ್ಕು ರೋಟರಾಕ್ಟ್ ಜಿಲ್ಲೆಗಳಿಂದ 250ಕ್ಕೂ ಹೆಚ್ಚು ರೋಟರಾಕ್ಟರ್‌ಗಳು ಭಾಗವಹಿಸಿದ್ದರು. ಸಾಂಪ್ರದಾಯಿಕ ಡೊಳ್ಳು ಕುಣಿತದೊಂದಿಗೆ ಅಧ್ಯಕ್ಷರ ಮಾರ್ಚ್ ಮೂಲಕ ಸಮ್ಮೇಳನ ಆರಂಭವಾಯಿತು. ಬಳಿಕ ಭರತನಾಟ್ಯ ಪ್ರದರ್ಶನದೊಂದಿಗೆ ಅಧಿಕೃತ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಜಿಲ್ಲಾ ಗವರ್ನರ್ ರೋಟೇರಿಯನ್ ರಾಮಕೃಷ್ಣ ಪಿಕೆ ಹಾಗೂ ಜಿಲ್ಲಾ ಗವರ್ನರ್ ನಾಮನಿರ್ದೇಶಿತ ರೋಟೇರಿಯನ್ ಯಶಸ್ವಿ ಸೋಮಶೇಖರ್ ಅವರ ಸಮ್ಮುಖದಲ್ಲಿ ಜಿಲ್ಲಾ ರೋಟರಾಕ್ಟ್ ಪ್ರತಿನಿಧಿ DRR PHF Rtr. Rtn. Prajwal R ಅವರಿಗೆ ಕಾಲರ್ ಧಾರಣೆ ಮಾಡಲಾಯಿತು. ಗಣ್ಯರು ದೀಪ ಬೆಳಗಿಸಿ ಸಮ್ಮೇಳನವನ್ನು ಉದ್ಘಾಟಿಸಿದರು. ಸಮುದಾಯ ಸೇವೆಯಲ್ಲಿ ಗಮನಾರ್ಹ ಕೊಡುಗೆ ನೀಡಿದ 10 ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ ದಿವಂಗತ PDG ಸೂರ್ಯಪ್ರಕಾಶ್ ಭಟ್ ಅವರ ಸ್ಮರಣಾರ್ಥ ಸ್ಥಾಪಿಸಲಾದ ‘ರೋಟರಾಕ್ಟ್ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಿವಂಗತ PDRR ಅಭಿಜಿತ್ ಅವರ ಸ್ಮರಣಾರ್ಥ ವಿಶೇಷ ಸಮ್ಮೇಳನ ಟಿ-ಶರ್ಟ್ ಬಿಡುಗಡೆ ಮಾಡಿ, ಅವರ ಗೌರವಾರ್ಥ ಸೇವಾ ಯೋಜನೆಯನ್ನೂ ಘೋಷಿಸಲಾಯಿತು. ಮೊದಲ ದಿನ ಟೋಸ್ಟ್‌ಮಾಸ್ಟರ್ಸ್ ಅಧಿವೇಶನ ಹಾಗೂ ಡಿಜೆ ಸಂಗೀತ ಕಾರ್ಯಕ್ರಮ ನಡೆಯಿತು. ಎರಡನೇ ದಿನ ಭಾರತೀಯ ಸೇನೆಯ ಶಿಸ್ತು ಮತ್ತು ಸೇವಾ ಮನೋಭಾವದ ಕುರಿತು ಮೇಜರ್ ರಾಘವೇಂದ್ರ ಪ್ರೇರಣಾದಾಯಕ ಭಾಷಣ ನೀಡಿದರು. ರಿಷ್ವಂಜಸ್ ರಿಷಿ ರಾಘವನ್ ಅವರು ರಾಷ್ಟ್ರ ನಿರ್ಮಾಣ ಮತ್ತು ಆಡಳಿತದಲ್ಲಿ ಯುವಕರ ಪಾತ್ರದ ಕುರಿತು ಮಾತನಾಡಿದರು. ಸಾ ರೇ ಗಾ ಮಾ ಪಾ ಸೀಸನ್ 21ರ ಸ್ಪರ್ಧಿ ಕಾರ್ತಿಕ್ ಅವರ ಸಂಗೀತ ಕಾರ್ಯಕ್ರಮವೂ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿತ್ತು. ವಿವಿಧ ರೋಟರಾಕ್ಟ್ ವಲಯಗಳು ತಮ್ಮ ವರ್ಷದ ಸೇವಾ ಯೋಜನೆಗಳನ್ನು ‘ಝೋನಲ್ ರೋಲ್ ಕಾಲ್’ ಮೂಲಕ ಪ್ರಸ್ತುತಪಡಿಸಿದವು. ಜೊತೆಗೆ Mr. & Miss 3181 ಸ್ಪರ್ಧೆಯೂ ನಡೆಯಿತು. ಸಮ್ಮೇಳನದ ಅಂತ್ಯದಲ್ಲಿ ನಡೆದ ಕಾನ್ಫರೆನ್ಸ್ ಅವಾರ್ಡ್ಸ್ ಸಮಾರಂಭದಲ್ಲಿ ಜಿಲ್ಲಾದ್ಯಂತ ಉತ್ತಮ ಸಾಧನೆ ಮಾಡಿದ ರೋಟರಾಕ್ಟ್ ಕ್ಲಬ್‌ಗಳು ಹಾಗೂ ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು. ‘ದಶ ಸಂಭ್ರಮ 2026’ ರೋಟರಾಕ್ಟ್ ಡಿಸ್ಟ್ರಿಕ್ಟ್ 3181ರ ಒಂದು ದಶಕದ ನಾಯಕತ್ವ, ಸೇವೆ ಮತ್ತು ಸ್ನೇಹವನ್ನು ಸಂಭ್ರಮಿಸಿದ ಎರಡು ದಿನಗಳ ಮಹತ್ವದ ಜಿಲ್ಲಾ ಸಮ್ಮೇಳನವಾಗಿ ಮೂಡಿಬಂದಿತು.

error: Content is protected !!
Scroll to Top