ಬೆಂಗಳೂರು ಮೂಲದ ಅನಿಲ್ ಚಕ್ರವರ್ತಿ ಅಡೋಬಿಯ ಮುಂದಿನ ಸಿಇಒ. ಬೆಂಗಳೂರಿನ ಬಸವನಗುಡಿಯಲ್ಲಿ ಬೆಳೆದ ಅನಿಲ್ ಚಕ್ರವರ್ತಿ ಅವರು ಜಾಗತಿಕ ಸಾಫ್ಟ್ವೇರ್ ದೈತ್ಯ ಅಡೋಬಿ (Adobe) ಸಂಸ್ಥೆಯ ಮುಂದಿನ ಅಧ್ಯಕ್ಷ ಹಾಗೂ ಸಿಇಒ ಆಗಿ ನೇಮಕಗೊಂಡಿದ್ದಾರೆ. ಅವರು 2026ರ ಡಿಸೆಂಬರ್ 1ರಿಂದ ಅಧಿಕಾರ ವಹಿಸಿಕೊಳ್ಳಲಿದ್ದು, 18 ವರ್ಷಕ್ಕೂ ಹೆಚ್ಚು ಕಾಲ ಅಡೋಬಿಯನ್ನು ಮುನ್ನಡೆಸಿದ ಶಂತನು ನಾರಾಯಣ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಶಂತನು ನಾರಾಯಣ್ ಅವರು ಬಳಿಕ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಪಡೆದ ಅನಿಲ್ ಚಕ್ರವರ್ತಿ, ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಬಳಿಕ ಐಐಟಿ ಹಾಗೂ ಎಂಐಟಿಯಲ್ಲಿ ಶಿಕ್ಷಣ ಮುಂದುವರಿಸಿದ್ದರು. ಇದೀಗ ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಬಸವನಗುಡಿಯಿಂದ ಸಿಲಿಕಾನ್ ವ್ಯಾಲಿವರೆಗೆ — ಹೆಮ್ಮೆಯ ಬೆಂಗಳೂರು ಸಾಧನೆ!
