Hagalakayi Gojju / Bitter Gourd | ಕಹಿ ಕಡಿಮೆ ಇರುವ ಹಾಗಲಕಾಯಿ ಗೊಜ್ಜು | Kannadigara Vani

ಹಾಗಲಕಾಯಿಯಿಂದ ಈರುಳ್ಳಿ, ಬೆಳ್ಳುಳ್ಳಿ ಬಳಸದೆ ರುಚಿಯಾದ ಗೊಜ್ಜು ತಯಾರಿಸಬಹುದು. ಮೊದಲು ಹಾಗಲಕಾಯಿಯನ್ನು ಕತ್ತರಿಸಿ, ಸ್ವಲ್ಪ ಉಪ್ಪು ನೀರಿನಲ್ಲಿ ನೆನೆಸಿ ನಂತರ ತೊಳೆದುಕೊಳ್ಳಬೇಕು. ಮಿಕ್ಸಿಗೆ ಅರ್ಧ ಕಪ್ ತೆಂಗಿನ ತುರಿ, 5–6 ಒಣಮೆಣಸಿನಕಾಯಿ, 1 ಸ್ಪೂನ್ ಜೀರಿಗೆ ಹಾಗೂ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ ಹಾಗೂ ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಬೇಕು. ನಂತರ ಕತ್ತರಿಸಿದ ಹಾಗಲಕಾಯಿ ಮತ್ತು ಸ್ವಲ್ಪ ಅರಿಶಿನ ಸೇರಿಸಿ ಹುರಿಯಬೇಕು. ಅರ್ಧ ಕಪ್ ಹುಣಸೆ ರಸ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ 1 ಸ್ಪೂನ್ ಬೆಲ್ಲ ಸೇರಿಸಿ ಬೇಯಿಸಬೇಕು. ನಂತರ ತಯಾರಿಸಿದ ತೆಂಗಿನಕಾಯಿ ಪೇಸ್ಟ್ ಸೇರಿಸಿ, ಕಡಿಮೆ ಉರಿಯಲ್ಲಿ ಸುಮಾರು 10 ನಿಮಿಷ ಬೇಯಿಸಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಹಾಗಲಕಾಯಿ ಗೊಜ್ಜು ಸವಿಯಲು ಸಿದ್ಧ.

error: Content is protected !!