Justice M Nagaprasanna | ಕರ್ನಾಟಕ ಹೈಕೋರ್ಟ್‌ನಲ್ಲಿ 555 ಪ್ರಕರಣಗಳ ವಿಚಾರಣೆ: ರಾತ್ರಿ 8.05ರವರೆಗೆ ಕಲಾಪ

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನ ಕೋರ್ಟ್ ಹಾಲ್‌ 14ರಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಅಧ್ಯಕ್ಷತೆಯಲ್ಲಿ ಗುರುವಾರ ವ್ಯಾಪಕ ನ್ಯಾಯಾಂಗ ಕಲಾಪ ನಡೆಯಿತು. ಬೆಳಗ್ಗಿನಿಂದ ಆರಂಭವಾದ ವಿಚಾರಣೆಗಳು ರಾತ್ರಿ 8.05ರವರೆಗೆ ಮುಂದುವರಿದಿದ್ದು, ಒಂದೇ ದಿನದಲ್ಲಿ ಒಟ್ಟು 555 ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಲಾಯಿತು. ಇಂದಿನ ವಿಚಾರಣೆಯಲ್ಲಿ 305 ಪ್ರಕರಣಗಳು ಲಿಸ್ಟೆಡ್ ಪ್ರಕರಣಗಳಾಗಿದ್ದರೆ, 250 ಮೂವ್ಡ್ ಮ್ಯಾಟರ್ಸ್‌ಗಳನ್ನು ವಿಚಾರಣೆ ನಡೆಸಲಾಯಿತು. ವಿಶೇಷವಾಗಿ 250 ಮೂವ್ಡ್ ಮ್ಯಾಟರ್ಸ್ ಪ್ರಕರಣಗಳನ್ನು ಸುಮಾರು 2.5 ಗಂಟೆಗಳ ಅವಧಿಯಲ್ಲಿ ವಿಚಾರಣೆ ನಡೆಸಿರುವುದು ಗಮನಾರ್ಹವಾಗಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠದ ಮುಂದೆ ದಿನದಾದ್ಯಂತ ವಿವಿಧ ಪ್ರಕರಣಗಳ ವಿಚಾರಣೆ ನಡೆಯಿತು. ನಿಗದಿತ ಪಟ್ಟಿಯಲ್ಲಿದ್ದ ಪ್ರಕರಣಗಳ ಜೊತೆಗೆ ಹೆಚ್ಚುವರಿಯಾಗಿ ಮಂಡಿಸಲಾದ ಮೂವ್ಡ್ ಮ್ಯಾಟರ್ಸ್‌ಗಳನ್ನೂ ವಿಚಾರಣೆಗೆ ಕೈಗೆತ್ತಿಕೊಳ್ಳಲಾಯಿತು. ರಾತ್ರಿ 8.05ರವರೆಗೆ ಕಲಾಪ ಮುಂದುವರಿದಿದ್ದು, ಒಟ್ಟು 555 ಪ್ರಕರಣಗಳ ವಿಚಾರಣೆ ನಡೆದಿರುವುದು ಇಂದಿನ ಹೈಕೋರ್ಟ್ ಕಲಾಪದ ಪ್ರಮುಖ ಅಂಶವಾಗಿದೆ.

error: Content is protected !!