Ramya Jagath Mysuru | ₹31 ಲಕ್ಷ ಖರ್ಚು ಮಾಡಿ ಸರ್ಕಾರಿ ಶಾಲೆ ಹೈಟೆಕ್ ಮಾಡಿದ ರಮ್ಯಾ ಜಗತ್‌ಗೆ ಅವಮಾನ | Kannadigara Vani

₹31 ಲಕ್ಷ ಖರ್ಚು ಮಾಡಿ ಸರ್ಕಾರಿ ಶಾಲೆ ಹೈಟೆಕ್ ಮಾಡಿದ ರಮ್ಯಾ ಜಗತ್‌ಗೆ ಅವಮಾನ: SDMC ಸ್ಥಾನಕ್ಕೆ ರಾಜೀನಾಮೆ ಮೈಸೂರು: ಕೋಟೆಹುಂಡಿ ಗ್ರಾಮದ ಸರ್ಕಾರಿ ಶಾಲೆಯನ್ನು ದತ್ತು ಪಡೆದು, ಸ್ವಂತ ಹಣದಿಂದ ₹31.24 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿ ಅಭಿವೃದ್ಧಿಪಡಿಸಿದ್ದ ಯೂಟ್ಯೂಬರ್ ಹಾಗೂ ಸಮಾಜ ಸೇವಕಿ ರಮ್ಯಾ ಜಗತ್, ಶಾಲೆಯ ಸಭೆಯಲ್ಲಿ ಅವಮಾನಿಸಿದ ಆರೋಪದ ಹಿನ್ನೆಲೆಯಲ್ಲಿ SDMC ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಶಾಲೆಯಿಂದ ಹೊರಬಂದಿದ್ದಾರೆ. ವಿದ್ಯಾರ್ಥಿಗಳಿಗೆ ಸೂಟು-ಬೂಟು, ಬ್ಯಾಗ್, ವಾಟರ್ ಬಾಟಲ್ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಿದ್ದ ಅವರು, ಯೋಗ, ಕರಾಟೆ, ವಿಜ್ಞಾನ, ಸಂಗೀತ, ನೃತ್ಯ ಹಾಗೂ ಸ್ಪೋಕನ್ ಇಂಗ್ಲಿಷ್ ಶಿಕ್ಷಕರಿಗೆ ಸ್ವಂತ ಖರ್ಚಿನಲ್ಲಿ ವೇತನ ನೀಡುತ್ತಿದ್ದರು. ಶಾಲೆಯಲ್ಲಿ 8ನೇ ತರಗತಿ ಆರಂಭಿಸುವ ಪ್ರಸ್ತಾಪ ಮಂಡಿಸಿದ ವೇಳೆ ಕೆಲವರು, “ನಮ್ಮ ಅನುಮತಿ ಇಲ್ಲದೆ ಶಾಲೆ ದತ್ತು ಪಡೆಯಲು ನಿನಗೆ ಯಾರು ಅಧಿಕಾರ ಕೊಟ್ಟರು?” ಎಂದು ಪ್ರಶ್ನಿಸಿ ಅವಮಾನಿಸಿದ್ದಾರೆ ಎಂದು ರಮ್ಯಾ ಆರೋಪಿಸಿದ್ದಾರೆ. ಶಾಲಾ ಸಭಾಂಗಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಟ್ಟಿದ್ದಕ್ಕೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಘಟನೆಯಿಂದ ನೊಂದಿರುವ ರಮ್ಯಾ, ತಮ್ಮ ಮಗನ ಟಿ.ಸಿಗೂ ಅರ್ಜಿ ಸಲ್ಲಿಸಿದ್ದು, ಮುಂದೆಯೂ ಸರ್ಕಾರಿ ಶಾಲೆಗಳಿಗಾಗಿ ಸೇವೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.

error: Content is protected !!