Chintamani News | 14 ವರ್ಷಗಳ ಸೇವೆಯ ಪಯಣ: ‘ಜೀವಜಲ’ದಿಂದ ‘ಪ್ರಸಾದಂ’ ಹೊಸ ಹೆಜ್ಜೆ

14 ವರ್ಷಗಳ ಸೇವೆಯ ಪಯಣ: ‘ಜೀವಜಲ’ದಿಂದ ‘ಪ್ರಸಾದಂ’ ಹೊಸ ಹೆಜ್ಜೆ ಚಿಂತಾಮಣಿ: ಕಳೆದ 14 ವರ್ಷಗಳಿಂದ ಚಿಂತಾಮಣಿ ಕ್ಷೇತ್ರದಲ್ಲಿ ‘ಜೀವಜಲ’ದ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ ಇದೀಗ ‘ಪ್ರಸಾದಂ’ ಹೆಸರಿನಲ್ಲಿ ಹೊಸ ಸೇವೆಯನ್ನು ಆರಂಭಿಸಿದೆ ಎಂದು ದೀನ್ ದಯಾಳ್ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ಅಧ್ಯಕ್ಷರು, ಸಮಾಜ ಸೇವಕರು ಹಾಗೂ ಅಖಿಲ ಭಾರತ ಚಿರಂಜೀವಿ ಸಂಘಟನೆಯ ಅಧ್ಯಕ್ಷರಾದ ಸತ್ಯನಾರಾಯಣ ಮಹೇಶ್ ತಿಳಿಸಿದ್ದಾರೆ. ಪ್ರತಿಯೊಬ್ಬರಿಗೂ ಶುದ್ಧ, ರುಚಿಕರ ಹಾಗೂ ಗುಣಮಟ್ಟದ ಆಹಾರವನ್ನು ಕೈಗೆಟುಕುವ ದರದಲ್ಲಿ ಒದಗಿಸುವುದು ‘ಪ್ರಸಾದಂ’ ಸೇವೆಯ ಉದ್ದೇಶವಾಗಿದೆ. “ಜೀವಜಲದಲ್ಲಿ ನೀರಿನ ಸೇವೆ… ಪ್ರಸಾದದಲ್ಲಿ ಅನ್ನದ ಸೇವೆ… ಸೇವೆಯೇ ನಮ್ಮ ಸಂಕಲ್ಪ” ಎಂಬ ಧ್ಯೇಯದೊಂದಿಗೆ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ದೀನ್ ದಯಾಳ್ ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ನಡೆಯುತ್ತಿರುವ ಈ ಸಮಾಜಮುಖಿ ಕಾರ್ಯವು “ಆಹಾರದಲ್ಲಿ ಗುಣಮಟ್ಟ… ಸೇವೆಯಲ್ಲಿ ಮಾನವೀಯತೆ” ಎಂಬ ಆಶಯದೊಂದಿಗೆ ಮುಂದುವರಿಯಲಿದೆ.

error: Content is protected !!