ಕ್ಯಾಟರಿಂಗ್ ಸ್ಪೆಷಲ್ ವೆಜಿಟೇಬಲ್ ಶಾವಿಗೆ ಬಾತ್ ತಯಾರಿಸಲು ಅರ್ಧ ಕೆಜಿ ಶಾವಿಗೆಯನ್ನು ತೆಗೆದುಕೊಂಡು, ಕುದಿಯುತ್ತಿರುವ ನೀರಿನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ನಂತರ ಹಸಿಮೆಣಸಿನಕಾಯಿ, ಕರಿಬೇವು ಹಾಗೂ ಈರುಳ್ಳಿ ಸೇರಿಸಬೇಕು. ಮುಂದೆ ಕ್ಯಾರೆಟ್, ಬೀನ್ಸ್ ಮತ್ತು ಕ್ಯಾಪ್ಸಿಕಂ ಸೇರಿಸಿ, ಸ್ವಲ್ಪ ಉಪ್ಪು ಹಾಕಿ ಸುಮಾರು 70% ಮಾತ್ರ ಫ್ರೈ ಮಾಡಬೇಕು. ನಂತರ ಅರಿಶಿನ, ತೆಂಗಿನಕಾಯಿ ಮತ್ತು ಕೊತ್ತಂಬರಿ ಸೇರಿಸಬೇಕು. ಒಗ್ಗರಣೆ ಹಾಗೂ ತರಕಾರಿ ಸಿದ್ಧವಾದ ಬಳಿಕ ಬೇಯಿಸಿದ ಶಾವಿಗೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕೊತ್ತಂಬರಿ ಸೇರಿಸಿ ಮಿಶ್ರಣ ಮಾಡಿದರೆ ರುಚಿಕರವಾದ ವೆಜಿಟೇಬಲ್ ಶಾವಿಗೆ ಬಾತ್ ಸಿದ್ಧ.
